ಕ್ರಿಶ್ಚಿಯಾನೆ ನುಸ್ಲೀನ್ ವೊಲ್ಹಾರ್ಡ್ ರವರು ಜರ್ಮನಿಯ ಜೀವಶಾಸ್ತ್ರಜ್ಞೆ.(ಜನನ- ೨೦ ಅಕ್ಟೋಬರ್ ೧೯೪೨). ಇವರು ತುಬಿಂಗನ್ ವಿಶ್ವವಿದ್ಯಾನಿಲಯದಿಂದ ೧೯೪೭ ರಲ್ಲಿ ಪಿ.ಎಚ್.ಡಿ ಪದವಿಯನ್ನು ಪಡೆದರು,ಅಲ್ಲಿ ಅವರು ಪ್ರೋಟೀನ್ - ಡಿಎನ್ಎ ನಲ್ಲಿನ ಪರಸ್ಪರ ಕ್ರಿಯೆಯನ್ನು ಅಧ್ಯಯನ ಮಾಡಿದರು. ಫಿಸಿಯೋಲಜಿ/ಮೆಡಿಸಿನ್ ನಲ್ಲಿ ಭ್ರೂಣದ ಬೆಳವಣಿಗೆಯ ಅನುವಂಶಿಕ ನಿಯಂತ್ರಣದ ಕುರಿತಾದ ಸಂಶೋಧನೆಗಾಗಿ ಅವರು ೧೯೯೫ ರಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದರು. == ಆರಂಭಿಕ ಜೀವನ == ನುಸ್ಲೀನ್ ವೊಲ್ಹಾರ್ಡ್ ರವರು ಮ್ಯಾಗ್ಡೆಬರ್ಗ್ ನಲ್ಲಿ ೨೦ ಅಕ್ಟೋಬರ್ ೧೯೪೨ ರಂದು ಜನಿಸಿದರು. ಅವರ ತಂದೆ ವಾಸ್ತುಶಿಲ್ಪಿಯಾಗಿದ್ದರಿಂದ ಆಕೆ ಕಲಾಕೃತಿಗೆ ಒಡ್ಡಿಕೊಂಡರು, ಹಾಗಾಗಿ ವಿಷಯಗಳನ್ನು ನೋಡುವುದರಲ್ಲಿ ಮತ್ತು ವಿಷಯಗಳನ್ನು ಗುರುತಿಸುವುದರಲ್ಲಿ ತರಬೇತಿ ನೀಡಲಾಯಿತು. == ಶಿಕ್ಷಣ == ನುಸ್ಲೀನ್ ವೊಲ್ಹಾರ್ಡ್ ರವರು ತುಬಿಂಗನ್ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣ ಪಡೆದರು. ಅವರು ೧೯೭೪ ನಲ್ಲಿ ಪ್ರೋಟೀನ್ - ಡಿಎನ್ಎ ನಲ್ಲಿನ ಪರಸ್ಪರ ಕ್ರಿಯೆಗಳ ಸಂಶೋಧನಕ್ಕಾಗಿ ಪಿಎಚ್ಡಿ ಮಾಡಿದರು. == ಪ್ರಶಸ್ತಿಗಳು == ಜರ್ಮನ್ ರಿಸರ್ಚ್ ಫೌಂಡೇಶನ್ ನ ಗಾಟ್ಫ್ರೈಡ್ ವಿಲ್ಹೆಲ್ಮ್ ಲಿಬ್ನೆಜ್ ಪ್ರಶಸ್ತಿ - ೧೯೮೬. ಗೈಸೆನ್ ವಿಶ್ವವಿದ್ಯಾಲಯದ ಫ್ರಾಂಜ್ ವೋಗ್ಟ್ ಪ್ರಶಸ್ತಿ - ೧೯೮೬. ಬೇಸಿಕ್ ಮೆಡಿಕಲ್ ರಿಸರ್ಚ್ ಗಾಗಿ ಆಲ್ಬರ್ಟ್ ಲಸ್ಕರ್ ಪ್ರಶಸ್ತಿ - ೧೯೯೧. ಉಟ್ರೆಕ್ಟ್ ವಿಶ್ವವಿದ್ಯಾನಿಲಯದಿಂದ ಗೌರವಾನ್ವಿತ ಡಾಕ್ಟರೇಟ್ ಪದವಿ - ೧೯೯೧. ಪ್ರಿನ್ಸ್ಟನ್ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ - ೧೯೯೧. ಆಲ್ಫ್ರೆಡ್ ಪಿ. ಸ್ಲೋನ್ ಜೂನಿಯರ್ ಪ್ರಶಸ್ತಿ - ೧೯೯೨. ಮೆಡಿಸಿನ್ ಗಾಗಿ ಲೂಯಿಸ್ ಜೀನ್ಟೆಟ್ ಪ್ರಶಸ್ತಿ - ೧೯೯೨. ಕೊಲಂಬಿಯಾ ವಿಶ್ವವಿದ್ಯಾನಿಲಯದಿಂದ ಲೂಯಿಸಾ ಗ್ರಾಸ್ ಹೊರ್ವಿಟ್ಜ್ ಪ್ರಶಸ್ತಿ - ೧೯೯೨. ಬಯೋಕೆಮಿಸ್ಟ್ರಿ ಮತ್ತು ಮಾಲಿಕ್ಯುಲರ್ ಬಯಾಲಜಿಗಾಗಿ ಜರ್ಮನ್ ಸೊಸೈಟಿಯ ವೊಟ್ಟೊ ವಾರ್ಬರ್ಗ್ ಪದಕ - ೧೯೯೨. ಫ್ರೈಬರ್ಗ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ - ೧೯೯೩. ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ - ೧೯೯೩. ಯುರೋಪಿಯನ್ ಬಯೋಕೆಮಿಕಲ್ ಸೊಸೈಟೀಸ್ ವತಿಯಿಂದ ಸರ್ ಹ್ಯಾನ್ಸ್ ಕ್ರೆಬ್ಸ್ ಮೆಡಲ್ - ೧೯೯೩. ಅರ್ನ್ಸ್ಟ್ ಶೆರಿಂಗ್ ಪ್ರಶಸ್ತಿ - ೧೯೯೩. ಮೆರಿಟ್ ಕ್ರಾಸ್ ಆಫ್ ದಿ ಫೆಡರಲ್ ರಿಪ್ಲಬಿಕ್ ಆಫ್ ಜರ್ಮನಿ - ೧೯೯೪. ಫಿಸಿಯೋಲಜಿಯಲ್ಲಿ ನೊಬೆಲ್ ಪ್ರಶಸ್ತಿ - ೧೯೯೫. ಪೌರ್ ಲೆ ಮೆರಿಟ್ ಫಾರ್ ಸೈನ್ಸ್ ಅಂಡ್ ಆರ್ಟ್ಸ್ - ೧೯೯೭. ಬಾಡೆನ್-ವುರ್ಟೆಂಬರ್ಗ್ ನ ಆರ್ಡರ್ ಆಫ್ ಮೆರಿಟ್ - ೧೯೯೬. ಗ್ರ್ಯಾಂಡ್ ಮೆರಿಟ್ ಕ್ರಾಸ್ ವಿದ್ ಸ್ಟಾರ್ ಅಂಡ್ ಸ್ಯಾಶ್ ಆಫ್ ದಿ ಫೆಡರಲ್ ರಿಪ್ಲಬಿಕ್ ಆಫ್ ಜರ್ಮನಿ - ೨೦೦೫. ಫೆಡೆರೇಷನ್ ಆಫ್ ಜರ್ಮನ್ ಫೌಂಡೇಷನ್ ನ ಜರ್ಮನ್ ಸಂಸ್ಥಾಪಕ ಪ್ರಶಸ್ತಿ - ೨೦೦೭. ವಿಜ್ಞಾನ ಮತ್ತು ಕಲೆಗಾಗಿ ಆಸ್ಟ್ರಿಯನ್ ಅಲಂಕಾರ - ೨೦೦೯. ಸೇಂಟ್ ಆಂಡ್ರ್ಯೂಸ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ - ೨೦೧೧. ಬಾತ್ ವಿಶ್ವವಿದ್ಯಾಲಯದಿಂದ ಗೌರವಾನ್ವಿತ ಡಾಕ್ಟರೇಟ್ - ೨೦೧೩. ಸೈನ್ಸ್ ಮತ್ತು ಆರ್ಟ್ಸ್ ಗಾಗಿ ಪೋರ್ ಮೆರಿಟ್ ಪ್ರಶಸ್ತಿ - ೨೦೧೩. ಬವೇರಿಯನ್ ಮ್ಯಾಕ್ಸಿಮಿಲಿಯನ್ ಆರ್ಡರ್ ಫಾರ್ ಸೈನ್ಸ್ ಅಂಡ್ ಅರ್ಟ್ - ೨೦೧೪. == ಸದಸ್ಯತ್ವ == ಯುರೋಪಿಯನ್ ಅಕಾಡೆಮಿಯ ಸಂಸ್ಥಾಪಕ ಸದಸ್ಯ - ೧೯೮೯. ಹೈಡೆಲ್ಬರ್ಗ್ ಅಕಾಡೆಮಿ ಆಫ್ ಸೈನ್ಸಸ್ ನ ಸದಸ್ಯ - ೧೯೮೯. ನಾರ್ಥ್ ರೈನ್ ವೆಸ್ಟ್‌ಫಾಲಿಯಾ ಅಕಾಡೆಮಿ ಆಫ್ ಸೈನ್ಸಸ್ ಅಂಡ್ ಆರ್ಟ್ಸ್ ನ ಸದಸ್ಯ - ೧೯೯೦. ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ , ವಾಷಿಂಗ್ಟನ್ ನ ಸದಸ್ಯ - ೧೯೯೦. ಜರ್ಮನ್ ಅಕಾಡೆಮಿ ಆಫ್ ಸೈನ್ಸಸ್ ನ ಸದಸ್ಯ - ೧೯೯೧. ಫೆಡರಲ್ ಗವರ್ನಮೆಂಟ್ ನ ಎಥಿಕ್ಸ್ ಕೌನ್ಸಿಲ್ ಸದಸ್ಯ - ೨೦೦೧-೨೦೦೬. = ಉಲ್ಲೇಖಗಳು =